ರಾಜ್ಯದ 8 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್: ಅಧಿಕೃತ ಘೋಷಣೆ ಬಾಕಿ..? ಬೆಂಗಳೂರು,ಮಾರ್ಚ್,8,2024(..):ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಇದೀಗ ರಾಜ್ಯದ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಿದ್ದು ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಮೊದಲ ಈ ಪಟ್ಟಿಯಲ್ಲಿ ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಮಂಡ್ಯದಿಂದ ಸ್ಟಾರ್ ಚಂದ್ರು ಅವರ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. 8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ. ಶಿವಮೊಗ್ಗ-ಗೀತಾ ಶಿವರಾಜ್ ಕುಮಾರ್ ಉಡುಪಿ-ಚಿಕ್ಕಮಗಳೂರು –ಜಯಪ್ರಕಾಶ್ ಹೆಗಡೆ ವಿಜಯಪುರ- ರಾಜು ಅಲಗೂರು ಮಂಡ್ಯ- ಸ್ಟಾರ್ ಚಂದ್ರು ತುಮಕೂರು -ಮುದ್ದಹನುಮೇಗೌಡ ಚಿತ್ರದುರ್ಗ- ಬಿಎನ್ ಚಂದ್ರಪ್ಪ ಬೆಂಗಳೂರು ಗ್ರಾಮಾಂತರ –ಡಿ.ಕೆ ಸುರೇಶ್ ಹಾಸನ ಶ್ರೇಯಸ್ -ಪಾಟೀಲ್ : – – 8 – -