ಜಿಲ್ಲಾಧಿಕಾರಿ ಎಂಬ ಹೆಸರನ್ನ ಕಲೆಕ್ಟರ್ ಎಂದು ಬದಲಾವಣೆ ಮಾಡಲು ಚಿಂತನೆ: ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ತೀರ್ಮಾನ… ಬೆಂಗಳೂರು,ಜ,23,2020(..): ಜಿಲ್ಲಾಧಿಕಾರಿ ಎಂದು ಕರೆಯಲಾಗುತ್ತಿದ್ದ ಹೆಸರನ್ನು, ಬದಲಾವಣೆ ಮಾಡಿ, ಕಲೆಕ್ಟರ್ ಎಂಬುದಾಗಿ ಬದಲಾವಣೆ ಮಾಡಲು ಕಂದಾಯ ಇಲಾಖೆ ಚಿಂತನೆ ನಡೆಸಿದ್ದು ಈ ಸಂಬಂಧ ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿ, ಡಿಸಿ ಎಂದು ಕರೆಯಲಾಗುತ್ತಿರುವ ಹೆಸರನ್ನು ಕಲೆಕ್ಟರ್ ಎಂಬುದಾಗಿ ಹೆಸರು ಬದಲಾವಣೆ ಮಾಡಲು ಇದೀಗ ಕಂದಾಯ ಇಲಾಖೆ ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಲ್ಲಿಸಲು ಸಿದ್ದಪಡಿಸುತ್ತಿದೆ. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಹೆಸರು ಬದಲಾವಣೆ ಪ್ರಸ್ತಾವನೆಯನ್ನ ಕಂದಾಯ ಇಲಾಖೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದೆ ಇಡಲಿದ್ದು, ಇದಕ್ಕೆ ಸಿಎಂ ಒಕೆ ಅಂದ್ರೇ, ರಾಜ್ಯದ ಜಿಲ್ಲಾಧಿಕಾರಿಗಳು, ಕಲೆಕ್ಟರ್ ಎಂಬುದಾಗಿ ಹೆಸರು ಬದಲಾವಣೆ ಆಗಲಿದೆ. ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಎಂಬ ಹೆಸರು ಕಲೆಕ್ಟರ್ ಎಂಬುದಾಗಿ ಬದಲಾದರೂ ಅವರ ಆಡಳಿತ ವ್ಯಾಪ್ತಿಯಲ್ಲಿ, ಆಡಳಿತ ವೈಖರಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. : –-- - - - -.