ಹೆಚ್.ಡಿ ಕುಮಾರಸ್ವಾಮಿಗೆ ಮುಸ್ಲೀಂ ಮತ ಕಾಂಗ್ರೆಸ್ ಗೆ ಹೋಗುವ ಆತಂಕ: ಹೀಗಾಗಿ ಇಂತಹ ಹೇಳಿಕೆ ನೀಡಿದ್ದಾರೆ- ಸಚಿವ ಆರ್ ಅಶೋಕ್ ಟಾಂಗ್… ಬೆಂಗಳೂರು,ಜ,23,2020(..): ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣುಕು ಪ್ರದರ್ಶನದಂತಿತ್ತು ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿಗೆ ಮುಸ್ಲೀಂಮತಗಳು ಕಾಂಗ್ರೆಸ್ ಗೆ ಹೋಗುವ ಆತಂಕ ಎದುರಾಗಿದೆ. ಹೀಗಾಗಿ ಮುಸ್ಲೀಂ ಮತಗಳನ್ನ ಸೆಳೆಯಲು ಪ್ಲಾನ್ ಮಾಡಿದ್ದಾರೆ. ಅದ್ದರಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಪೊಲೀಸರಿಗೆ ಅವಮಾನ ಆಗುವ ರೀತಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಅವರು ಅಧಿಕಾರ ದಲ್ಲಿರೋವಾಗ ಪೊಲೀಸರು ಬೇಕಿತ್ತು.ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಸಚಿವ ಎನ್‌ಎ ಹ್ಯಾರಿಸ್ ಭಾಗವಹಿಸಿದ್ದ ಸಭೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಇದನ್ನ ಮುಂಚಿತವಾಗಿ ಸಂಚು ರೂಪಿಸಲಾಗಿತ್ತೇ ಎನ್ನುವ ಕುರಿತು ತನಿಖೆ ನಡೆಸಬೇಕಿದೆ ಅದು ಪಟಾಕಿ ಎನ್ನುವ ಮಾತು ಕೇಳಿಬರ್ತಿದೆ. ಹ್ಯಾರಿಸ್ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದಾರೆ. ಹ್ಯಾರಿಸ್ ಕ್ಷೇತ್ರದಲ್ಲಿ ನಡೆದಿರುವುದು ಪ್ರೀ ಪ್ಲಾನಾ ಎನ್ನುವ ಕುರಿತು ತನಿಖೆ ವೇಳೆ ತಿಳಿದು ಬರಲಿದೆ ಎಂದು ತಿಳಿಸಿದರು. : –- - - - -