ರಾಜಕೀಯಕ್ಕೆ ದೇಶಪ್ರೇಮವನ್ನ ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ಬೇಸರ ತಂದಿದೆ-ಸಚಿವ ಸುರೇಶ್ ಕುಮಾರ್ ವಿರುದ್ದ ಹೆಚ್.ಡಿ. ಕುಮಾರಸ್ವಾಮಿ ಕಿಡಿ… ಬೆಂಗಳೂರು,ಜ,22,2020(..): ಚಕ್ರವರ್ತಿ ಸೂಲಿ ಬೆಲೆಯ ಕಾರ್ಯಕ್ಕೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು 1st ನೀಡಿದ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರಿಗಳಲ್ಲೂ ಧರ್ಮ ಹುಡುಕಿದವ, ಮತ ಕೇಳಲು ವೀರಯೋಧ ಅಭಿನಂದನ್ ವರ್ದಮಾನ್ ಫೋಟೊ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಸದಾನಂದಗೌಡರಿಂದಲೇ ದೇಶದ್ರೋಹಿ ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿ ಎಂದು ಟೀಕಿಸಿದ್ದಾರೆ. ತಾಯಿ ಮೇಲಿನ ಪ್ರೀತಿಗೆ ನೀಡಲು ಸಾಧ್ಯವೇ..? ಹಾಗೆಯೇ ಇನ್ನೊಂದು ಟ್ವಟ್ಟರ್ ನಲ್ಲಿ ಸಚಿವ ಸುರೇಶ್ ಕುಮಾರ್ ಅವರಿಗೆ ಕುಟುಕಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ‘ದೇಶಪ್ರೇಮಕ್ಕೆ ಕೊಡುತ್ತಾರೆ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ‌ ಮೇಲಿನ ನನ್ನ ಅಭಿಮಾನಕ್ಕೇ ಕುಂದುಂಟಾಗಿದೆ…ದೇಶಪ್ರೇಮದ ವಿಚಾರದಲ್ಲಿ ಕೊಟ್ಟರೆ ‘ಆತ’ ಕೊನೇ ಎಂದು ಕಿಡಿಕಾರಿದ್ದಾರೆ. : - -- -