ಮರಾಠಿ ಚಿತ್ರದತ್ತ ಹೆಜ್ಜೆ ಇಟ್ಟ ನಟಿ ಅದಿತಿ ಪ್ರಭುದೇವ ಬೆಂಗಳೂರು, ಜನವರಿ 22, 2019 (..):ನಟಿ ಅದಿತಿ ಪ್ರಭುದೇವ ಇತ್ತ ಕನ್ನಡದಲ್ಲೂ ಅತ್ತ ಮರಾಠಿ ಚಿತ್ರದಲ್ಲೂ ಬಣ್ಣ ಅಚ್ಚಲು ರೆಡಿಯಾಗಿದ್ದಾರೆ. ಸಾಹುರಾಜ್ ಶಿಂಧೆ ನಿರ್ದೇಶಿಸಲಿರುವ ‘ಚಾಂಪಿಯನ್’ ಚಿತ್ರಕ್ಕೆ ಅದಿತಿ ಸಹಿ ಮಾಡಿದ್ದು, ಈ ಸಿನಿಮಾ ಎರಡು ಭಾಷೆಗಳಲ್ಲಿ ತೆರೆಗೆ ಬರಲಿದೆ. ಅಂದರೆ ಕನ್ನಡದಲ್ಲೂ ಹಾಗೂ ಮರಾಠಿಯಲ್ಲೂ ಈ ಚಿತ್ರವನ್ನು ಪ್ರತ್ಯೇಕವಾಗಿ ಚಿತ್ರೀಕರಿಸಲಾಗುತ್ತದೆ. ಮರಾಠಿ ಚಾಂಪಿಯನ್​ನಲ್ಲಿ ಸಚಿನ್ ಧನ್​ಪಾಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಮರಾಠಿ ವರ್ಷನ್​ನತ್ತ ಮುಖ ಮಾಡಿದೆ.