ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಶಿಖರ್ ಧವನ್ ಡೌಟ್ ! ಬೆಂಗಳೂರು, ಜನವರಿ 20, 2019 (..): ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್, ನ್ಯೂಜಿಲೆಂಡ್ ಸರಣಿ ಆಡೋದು ಅನುಮಾನವಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಬೆಂಗಳೂರು ಏಕದಿನ ಪಂದ್ಯದ ವೇಳೆ ಧವನ್, ಎಡ ಭುಜಕ್ಕೆ ಗಾಯ ಮಾಡಿಕೊಂಡ ಪರಿಣಾಮ ಕಿವೀಸ್ ಸರಣಿಗೆ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಆಸಿಸ್ ಇನ್ನಿಂಗ್ಸ್​ನ 5ನೇ ಓವರ್​ನಲ್ಲಿ ಕವರ್ಸ್​ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಧವನ್, ಌರೋನ್ ಫಿಂಚ್ ಬಾರಿಸಿದ ಚೆಂಡನ್ನ ತಡೆಯಲು ಹೋಗಿ ಎಡ ಭುಜಕ್ಕೆ ಗಾಯಮಾಡಿಕೊಂಡಿದ್ದರು. ನಂತರ ಫೀಲ್ಡ್​ನಿಂದ ಹೊರ ಹೋದ ಧವನ್, ಬ್ಯಾಟಿಂಗೂ ಆಗಮಿಸಲಿಲ್ಲ. ಧವನ್ ಬದಲಿಗೆ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು.