ರಸ್ತೆ ಅಪಘಾತದಲ್ಲಿ ಹಿಂದಿ ಚಿತ್ರ ನಟಿ ನಟಿ ಶಬಾನಾ ಆಜ್ಮಿ ( ) ಗಂಭೀರ ಗಾಯ.. ಮುಂಬೈ, ಜ.18, 2020 : ( .. ) ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ನಟಿ ಶಬಾನಾ ಅಜ್ಮಿ ಗಾಯಗೊಂಡಿದ್ದಾರೆ. ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಖಲಾಪುರ ಬಳಿ ಇಂದು ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ. ನಟಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು , ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ರಾಯಗಡ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಸ್ಕರ್ ತಿಳಿಸಿದ್ದಾರೆ.ಘಟನೆ ಬಳಿಕ ಸುದ್ಧಿ ತಿಳಿದ ಕೂಡಲೇ ನಟಿ ಶಬಾನಾ ಅವರನ್ನು ನವೀ ಮುಂಬಯಿಯ ಎಂಜಿಎಂ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪತಿ ಮತ್ತು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಕೂಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ . ಘಟನೆಯಲ್ಲಿ ಅಖ್ತರ್ ಕೂಡ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ ಇನ್ನೊಬ್ಬ ಅಪರಿಚಿತ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಸ್ಥಳದ ತನಿಖೆಗಾಗಿ ಹೆದ್ದಾರಿ ಪೊಲೀಸ್ ಗಸ್ತು ತಂಡಗಳು ಧಾವಿಸಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. : - – - -- : - ’ , . , ,