ಮೈಸೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ‌ ಸಮಿತಿಗಳಿಗೆ ತಲಾ 7 ಸದಸ್ಯರು ಆಯ್ಕೆ… ಮೈಸೂರು,ಜ,18,2020(..): ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಇಂದು ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ತಸ್ಲೀಂ ಆಯ್ಕೆಯಾಗಿದ್ದು ಈ ಬೆನ್ನಲ್ಲೆ ಮೈಸೂರು ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನ ನೇಮಕ ಮಾಡಲಾಗಿದೆ. ತೆರೆಗೆ ಸುಧಾರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ ನಿರ್ಮಲಾ, ಸವಿತಾ, ಸೌಮ್ಯ, ಲಕ್ಷ್ಮೀ, ಅಕ್ಮಲ್ ಪಾಷಾ, ಶಮೀ ಉಲ್ಲಾ, ಜಿ‌.ಎಸ್.ಸತ್ಯರಾಜು. ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿಗೆ ಶೋಭಾ, ಗೋಪಿ, ಭಾಗ್ಯ, ಅಯಾಜ್ ಪಾಷಾ, ಉಷಾ, ಶಾರದಮ್ಮ, ಭುವನೇಶ್ವರಿ ಅವರನ್ನ ನೇಮಿಸಲಾಗಿದೆ. ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಗೆ ಸಯ್ಯದ್ ಅಶ್ರತ್ ಉಲ್ಲಾ, ಶ್ರೀನಿವಾಸ್, ರುಕ್ಮಿಣಿ, ರಮೇಶ್, ಅಜೀರಾ ಶೀಮಾ, ಸುನಂದ ಪಾಲನೇತ್ರ, ಪ್ರಮಿಳಾ ಭರತ್. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಶ್ವಿನಿ ಅನಂತು, ಬೇಗಂ ಪಲ್ಲವಿ, ಛಾಯಾದೇವಿ, ವೇದಾವತಿ, ಅಯೂಬ್ ಖಾನ್, ಆರಿಫ್ ಹುಸೇನ್, ಪ್ರದೀಪ್ ಚಂದ್ರ ಆಯ್ಕೆ ಮಾಡಲಾಯಿತು. ಎಲ್ಲಾ ಸಮಿತಿಗಳಿಗೂ ತಲಾ 7 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು. : – – - -.