ಎಸ್ ಡಿಪಿಐ ನಿಷೇಧಕ್ಕೆ ಆಗ್ರಹ: ಬಂಧನಕ್ಕೊಳಗಾದವರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಲಿ- ಸಚಿವ ಶ್ರೀರಾಮುಲು… ಬಳ್ಳಾರಿ,ಜ,17,2020(..): ಟೌನ್ ಹಾಲ್ ಬಳಿ ರ್ಯಾಲಿಯಲ್ಲಿ ಸಿಎಎ ಪರ ಭಾಷಣ ಮಾಡಿದ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಬಂಧನಕ್ಕೊಳಗಾಗಿರುವವರ ವಿರುದ್ದ ಸೂಕ್ತ ತನಿಖೆ ನಡೆಸಿ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಹಿಂದೂ ಕಾರ್ಯಕರ್ತರು ಮೇಲೆ ಹಲ್ಲೆ ಕೊಲೆಗೆ ಯತ್ನಿಸುತ್ತಿವೆ. ಹೀಗಾಗಿ ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಈ ಸಂಘಟನೆಯ ಕೆಲವರು ಬಂಧನಕ್ಕೊಳಗಾಗಿದ್ದಾರೆ . ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದರು. ಎಸ್ ಡಿಪಿಐ ಪಿಎಫ್ ಐ ಎರಡು ಸಂಘಟನೆಗಳನ್ನ ಬ್ಯಾನ್ ಮಾಡಲು ಗೃಹ ಸಚಿವರಿಗೆ ಮನವಿ ಮಾಡ್ತೇವೆ. ಮುಂದಿನ ತಿಂಗಳು ಸಿಎಂ ಬಿಎಸ್ ವೈ ದೆಹಲಿಗೆ ತೆರಳುತ್ತಾರೆ ಅಂದು ನಿಯೋಗ ತೆರಳಿ ಎಸ್ ಡಿಪಿಐ ನಿಷೇಧಕ್ಕೆ ಮನವಿ ಮಾಡ್ತೀವಿ ಎಂದು ಶ್ರೀರಾಮುಲು ತಿಳಿಸಿದರು. – ---