ಮುಖ್ಯಮಂತ್ರಿಗಳಿಗೆ ಪಂಚಮಶಾಲಿ ಸಮುದಾಯ ನಿಮ್ಮ ಕೈಬಿಡುತ್ತೆ ಎಂದು ಹೇಳಿದ್ದು ಸರಿಯಲ್ಲ – ಜಯಮೃತ್ಯುಂಜಯ ಸ್ವಾಮೀಜಿ ಬೆಂಗಳೂರು,ಜ,17,2020(..): ತಮ್ಮ ಸಮುದಾಯದ ನಾಯಕನಿಗೆ ಸಚಿವ ಸ್ಥಾನ ನೀಡದಿದ್ದರೇ ಪಂಚಮಶಾಲಿ ಸಮುದಾಯ ನಿಮ್ಮ ಕೈಬಿಡುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದು ಸರಿಯಲ್ಲ ಎಂದು ಜಯಮೃತ್ಯಂಜಯ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪಂಚಮಶಾಲಿ ಮಠಾಧೀಶರ ನಿಯೋಗ ಇಂದು ಸಿಎಂ ಬಿಎಸ್ ವೈ ಭೇಟಿ ಮಾಡಿತು. ಭೇಟಿ ಬಳಿಕ ಮಾತನಾಡಿದ ಜಯಮೃತ್ಯಂಜಯ ಸ್ವಾಮೀಜಿಗಳು, ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಿಎಂಗೆ ಬೇಸರವಾಗುವಂತೆ ಯಾರು ಮಾತನಾಡಬಾರದು. ಪಂಚಮಶಾಲಿ ಸಮುದಾಯ ನಿಮ್ಮ ಕೈಬಿಡುತ್ತೆ ಎಂಬ ಹೇಳಿಕೆ ಸರಿಯಲ್ಲ. ಬಿಎಸ್ ವೈ ಮೂರು ವರ್ಷ ಸಿಎಂ ಆಗಿರುತ್ತಾರೆ. ಸಿಎಂಗೆ ಅಗೌರವ ತೋರುವ ಯಾವ ವಿಚಾರವನ್ನು ಬೆಂಬಲಿಸಲ್ಲ. ರಾಜಕೀಯದಲ್ಲಿ ಸ್ವಾಮೀಜಿಗಳು ಹಸ್ತಕ್ಷೇಪ ಮಾಡಬಾರದು ಎಂದು ಸಲಹೆ ನೀಡಿದರು. : – - – - -