ಮೈಸೂರು-ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ…. ಮೈಸೂರು,ಜ,17,2020(..): ಸಾಂಸ್ಕೃತಿಕ ನಗರಿ ಮೈಸೂರಿನಿಂದ ಬೆಳಗಾವಿಗೆ ಇಂದಿನಿಂದ ನೂತನ ವಿಮಾನ ಹಾರಾಟ ಸೇವೆಗೆ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಮೈಸೂರು- ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಇಂದು ಹಸಿರು ನಿಶಾನೆ ತೋರಲಾಯಿತು ಮಧ್ಯಮ ವರ್ಗದ ಜನರ ಸೇವೆಗಾಗಿ ಕಡಿಮೆದರದಲ್ಲಿ ವಿಮಾನ ಪ್ರಯಾಣ ಸೇವೆ ಆರಂಭಿಸಲಾಗಿದೆ. ಈ ವಿಮಾನಸೇವೆ ಮೂಲಕ ಕೇವಲ 900 ರೂಗಳಲ್ಲಿ ಮೈಸೂರಿನಿಂದ ಬೆಳಗಾವಿಗೆ ಪ್ರಯಾಣ ಮಾಡಬಹುದು. ಈ ವಿಮಾನ ಕೇವಲ 1ಗಂಟೆ 20ನಿಮಿಷದಲ್ಲಿ ಬೆಳಗಾವಿ ತಲುಪಲಿದ್ದು ವಾರದ 7ದಿನವೂ ಮೈಸೂರು ಹಾಗೂ ಬೆಳಗಾವಿ ನಡುವೆ ವಿಮಾನ ಸಂಚಾರ ಮಾಡಲಿದೆ. : – - -