ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಹೊಸ ಡೆತ್ ವಾರೆಂಟ್ ಜಾರಿ: ನಾಲ್ವರು ಅಪರಾಧಿಗಳಿಗೆ ಫೆ.1 ರಂದು ಗಲ್ಲು… ನವದೆಹಲಿ,ಜ,17,2020(..): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಹೊಸ ಡೆತ್ ವಾರೆಂಟ್ ಹೊರಡಿಸಿದೆ. ನಾಲ್ವರು ಅಪರಾಧಿಗಳಿಗೆ ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿ ಮಾಡಿದ್ದು ಫೆಬ್ರವರಿ 1ರ ಬೆಳಿಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಕೋರ್ಟ್ ಆದೇಶಿಸಿದೆ. ಈ ಹಿಂದೆ ಜನವರಿ 22 ರಂದು ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಿತ್ತು. ಆದರೆ ಅಪರಾಧಿ ಮುಖೇಶ್ ಕ್ಷಮದಾನ ಕೋರಿ ಅರ್ಜಿಯನ್ನ ಸಲ್ಲಿಸಿದ್ದನು. ಈ ಅರ್ಜಿಯನ್ನ ರಾಷ್ಟ್ರಪತಿಗಳು ಇಂದು ತಿರಸ್ಕರಿಸಿದ್ದು ಈ ಹಿನ್ನೆಲೆ ನಾಲ್ವರು ಅಪರಾಧಿಗಳಾದ ಮುಕೇಶ್ , ವಿನಯ್ , ಅಕ್ಷಯ್ , ಪವನ್ ಗೆ ಫೆಬ್ರವರಿ 1 ರಂದು ಗಲ್ಲಿಗೇರಿಸಲು ಕೋರ್ಟ್ ಡೆತ್ ವಾರೆಂಟ್ ಹೊರಡಿಸಿದೆ. : - - –Feb1--