ರಿಜ್ವಾನ್ ಅರ್ಷಾದ್ ರಿಂದ ತೆರವಾದ ಎಂಎಲ್ ಸಿ ಸ್ಥಾನ ನನಗೆ ಕೊಡುವ ವಿಶ್ವಾಸವಿದೆ- ಡಿಸಿಎಂ ಲಕ್ಷ್ಮಣ್ ಸವದಿ…. ಬೆಂಗಳೂರು,ಜ,16,2020(..): ರಿಜ್ವಾನ್ ಅರ್ಷಾದ್ ರಿಂದ ತೆರವಾದ ಎಂಎಲ್ ಸಿ ಸ್ಥಾನ ನನಗೆ ಕೊಡುವ ವಿಶ್ವಾಸವಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು. ಈ ಬಗ್ಗೆ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ತಿಂಗಳ ಕೊನೆಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ರಿಜ್ವಾನ್ ಅರ್ಷಾದ್ ಅವರ ಎಂಎಲ್ ಸಿ ಸ್ಥಾನ ತೆರವಾಗಿದೆ. ಈ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಬೇಕಿದೆ. ಆ ಸ್ಥಾನವನ್ನ ನನಗೆ ಕೊಡುವ ವಿಶ್ವಾಸವಿದೆ ಎಂದರು. ಸಚಿವ ಸ್ಥಾನಕ್ಕೆ ಪಂಚಮಶಾಲಿ ಸ್ವಾಮೀಜಿ ಬೇಡಿಕೆ ವಿಚಾರ ಕುರಿತು ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಸಾಕಷ್ಟು ವಿವಾದವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ತಿಳಿಸಿದರು. : – - – – -