ಮೈಸೂರಿನಲ್ಲಿ ಜ.19 ರಂದು ಪೇಜಾವರ ಶ್ರೀಗಳಿಗೆ ಭಾವ ಪುಷ್ಪಾಂಜಲಿ ಕಾರ್ಯಕ್ರಮ –ಶಾಸಕ ಎಸ್.ಎ ರಾಮದಾಸ್ ಮಾಹಿತಿ… ಮೈಸೂರು,ಜ,16,2020(..): ಜನವರಿ 19 ರಂದು ಪೇಜಾವರ ಶ್ರೀಗಳಿಗೆ ಭಾವ ಪುಷ್ಪಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಾಮದಾಸ್, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಪೇಜಾವರ ಶ್ರೀಗಳಿಗೆ ಭಾವ ಪುಷ್ಪಾಂಜಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯ ವ್ಯಕ್ತಿಗಳು ಬರುತ್ತಿದ್ದಾರೆ. ಮೈಸೂರಿನ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಶ್ರೀಗಳ ಅಗಲಿಕೆ ನೋವಿಂದ ಭಕ್ತರು ಇಂದು ಸಹ ಹೊರ ಬಂದಿಲ್ಲ‌. ಶ್ರೀಗಳು ಎಲ್ಲಾ ಸಮಾಜದವರನ್ನ ಸಮಾನವಾಗಿ ಕಾಣ್ತಿದ್ರು. ಶ್ರೀಗಳಿಗೆ ಪೇಜಾವಾರ ಮಠ‌ ಬಿಟ್ರೆ, ಇಷ್ಟವಾದ ಸ್ಥಳ ಅಂದ್ರೆ ಮೈಸೂರು. ಅವರು ಸಮಾಜಕ್ಕಾಗಿ ಹಲವು ಬಾರಿ ಉಪವಾಸ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಚಾತುರ್ಮಾಸದಲ್ಲಿ ಪೌರ ಕಾರ್ಮಿಕರಿಗೆ ಅವರು ಊಟದ ವ್ಯವಸ್ಥೆ ಮಾಡಿದ್ರು. ಅಷ್ಟೆ ಅಲ್ಲದೆ ಪೌರಕಾರ್ಮಿಕರ ಜೊತೆ ಕೂತೆ ಊಟ ಮಾಡಿದ್ರು. ಜೈಲಿಗೂ ಹೋಗಿ ಖೈದಿಗಳ ವಾಸ್ತವತೆ ಅರಿಯುವ ಕೆಲಸ ಮಾಡ್ತಿದ್ರು. ಖೈದಿಗಳಿಗೆ ಊಟದ ವ್ಯವಸ್ಥೆ ಮಾಡಿ ಮನಪರಿವರ್ತನೆ ಮಾಡುವ ಕಾಯಕದಲ್ಲಿ ನಿರತರಾಗಿದ್ದರು ಎಂದು ಪೇಜಾವರ ಶ್ರೀಗಳನ್ನ ಶಾಸಕ ಎಸ್.ಎ ರಾಮದಾಸ್ ಸ್ಮರಿಸಿದರು. ಶ್ರೀಗಳ ಸಂಪೂರ್ಣ ಚಿತ್ರಣವನ್ನ ಜನರಿಗೆ ತಿಳಿಸಬೇಕಿದೆ. ಅದಕ್ಕಾಗಿ ಜ.19 ರಂದು ಪೇಜಾವರ ಶ್ರೀಗಳಿಗೆ ಭಾವ ಪುಷ್ಪಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು. : - - –--