ಜೆಡಿಎಸ್ ಜೊತೆ ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ-ಮಾಜಿ ಸಿಎಂ ಬಿಎಸ್ ವೈ. ನವದೆಹಲಿ,ಮಾರ್ಚ್,7,2024(..):ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಸೀಟು ಹಂಚಿಕೆ ಕುರಿತು ಇನ್ನೂ ಚರ್ಚೆಯಾಗಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಐ, ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರ ಈವರೆಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಜೆಡಿಎಸ್ ಜತೆ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ ಇಂದು ಬಹುತೇಕ ಟಿಕೆಟ್ ಅಂತಿಮವಾಗುತ್ತೆ. ಜೆಡಿಎಸ್ ಗೆ 2ರಿಂದ ಮೂರು ಸ್ಥಾನ ಬಿಟ್ಟುಕೊಡಬಹುದು ಎಂದರು. ಇನ್ನು ಡಾ. ಸಿಎನ್ ಮಂಜುನಾಥ್ ಸ್ಪರ್ಧೆ ಕುರಿತು ಚರ್ಚೆಯಾಗಿದೆ. ಹಾವೇರಿಯಿಂದ ಬೊಮ್ಮಾಯಿ, ಮಾಜಿ ಸಿಎಂ ಶೆಟ್ಟರ್ ಸ್ಪರ್ಧೆಯ ಬಗ್ಗೆಯೂ ಚರ್ಚೆಯಾಗಿದೆ ಎಂದು ಬಿಎಸ್ ವೈ ತಿಳಿಸಿದರು. : - - - – - -.