ಗೆಲುವಿನೊಂದಿಗೆ ಟೆನಿಸ್ ಅಂಗಳಕ್ಕೆ ಮರಳಿದ ಸಾನಿಯ ಬೆಂಗಳೂರು, ಜನವರಿ 15, 2020 (..): ಟೆನಿಸ್ ಕೋರ್ಟ್‌ಗೆ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ ಸಾನಿಯಾ ಮಿರ್ಜಾ. ತಮ್ಮ ಪಾರ್ಟ್ನರ್‌ ನಾದಿಯಾ ಕಿಚೆನೊಕ್‌ ಜೊತೆಗೂಡಿ ಹೋಬರ್ಟ್ ಇಂಟರ್‌ನ್ಯಾಷನಲ್ ಟೆನಿಸ್ ಕೂಟದ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ 2-6, 7-6, 10-3 ಸೆಟ್‌ಗಳನೇರ ಗೆಲುವಿನ ಮೂಲಕ ಕ್ಯಾರ್ಟರ್‌ ಪೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸ್ಟಾರ್‌ ಆಟಗಾರ್ತಿಯರಾದ ಒಕ್ಸಾನಾ ಕಲಾಶ್ನಿಕೋವಾ ಮತ್ತು ಮಿಯು ಕಾಟೋ ಜೋಡಿಯನ್ನು ಸಾನಿಯಾ ಹಾಗೂ ಕಿಚೆನೋಕ್‌ ಜೋಡಿ ಮಣಿಸಿದೆ.