ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಗೋಡೆಗಳ ಮೇಲೆ ‘ಫ್ರಿ ಕಾಶ್ಮೀರ್’ ಬರಹ: ಸ್ವಯಂಪ್ರೇರಿತ ದೂರು ದಾಖಲು… ಬೆಂಗಳೂರು,ಜ,14,2020(..): ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಫ್ರಿ ಕಾಶ್ಮೀರ ಪ್ಲೆ ಕಾರ್ಡ್ ಪ್ರದರ್ಶನ ದೊಡ್ಡಮಟ್ಟದ ಸದ್ದು ಮಾಡಿತ್ತು. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಫ್ರಿಕಾಶ್ಮೀರ ಬರಹ ಕಂಡು ಬಂದಿದೆ. ಹೌದು, ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಗೋಡೆಗಳ ಮೇಲೆ ಕಿಡಿಗೇಡಿಗಳು ಫ್ರಿ ಕಾಶ್ಮೀರ್ , ನೋ ಎನ್ ಆರ್ ಸಿ, ನೋ ಸಿಸಿಎ ಎಂದು ಬರೆದಿದ್ದಾರೆ. ರಾತ್ರಿ ವೇಳೆ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಅಲ್ಲದೆ ಮೋದಿ ಅಮಿತ್ ಶಾ ವಿರುದ್ದವೂ ನಿಂದಿಸಿ ಶಟರ್ ಗಳ ಮೇಲೆ ಬರೆದಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ಪರಿಶೀಲಿಸುತ್ತಿದ್ದು, ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. : - – - -