ಇಂಗ್ಲೆಂಡ್ ಬೌಲರ್’ಗೆ ಜನಾಂಗೀಯ ನಿಂದನೆ ಮಾಡಿದ ಕಿವೀಸ್ ಪ್ರಜೆಗೆ 2 ವರ್ಷ ನಿಷೇಧ ಆಕ್ಲಂಡ್ ( ನ್ಯೂಜಿಲ್ಯಾಂಡ್):, ಜನವರಿ 14, 2020 (..): ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಗೆ ಜನಾಂಗೀಯ ನಿಂದನೆ ಮಾಡಿದ ಕ್ರಿಕೆಟ್ ಅಭಿಮಾನಿಗೆ ಎರಡು ವರ್ಷ ನಿಷೇಧ ಹೇರಲಾಗಿದೆ. ಕಳೆದ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಗೆ ಜನಾಂಗೀಯ ನಿಂದನೆ ಮಾಡಲಾಗಿತ್ತು. ಮೊದಲ ಟೆಸ್ಟ್ ವೇಳೆ ಈ ಜನಾಂಗೀಯ ನಿಂದನೆ ಮಾಡಲಾಗಿತ್ತು. ಇದರಿಂದ ನೊಂದುಕೊಂಡಿದ್ದ ಆರ್ಚರ್ ಸರಣಿಯ ನಂತರ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಘಟನೆಯ ಬಳಿಕ ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಅವರು ಆರ್ಚರ್ ಬಳಿ ಕ್ಷಮೆ ಕೇಳಿದ್ದರು.