ಬುಶ್​ಫೈರ್ ಸಂತ್ರಸ್ತರಿಗೆ ನೆರವಾಗಲು ಚಾರಿಟಿ ಪಂದ್ಯಕ್ಕೆ ಆಸಿಸ್’ನ ದಿಗ್ಗಜ ಕ್ರಿಕೆಟಿಗರು ! ಸಿಡ್ನಿ, ಜನವರಿ 13, 2019 (..): ಬುಶ್​ಫೈರ್ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದಾರೆ. ಹೌದು. ಆಸಿಸ್ ನ ಮಾಜಿ ಕ್ರಿಕೆಟಿಗರು ಚಾರಿಟಿ ಮ್ಯಾಚ್ ಆಡಲು ಮುಂದಾಗಿದ್ದಾರೆ. ಫೆಬ್ರವರಿ 8ರಂದು ಮಾಜಿ ಕ್ರಿಕೆಟಿಗರ ನಡುವೆ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಬರುವ ಹಣವನ್ನ, ನೇರವಾಗಿ ಬುಶ್​ಫೈರ್ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ. ಗಿಲ್​ಕ್ರಿಸ್ಟ್, ಬ್ರೆಟ್ ಲೀ, ಜಸ್ಟಿನ್ ಲ್ಯಾಂಗರ್, ಮೈಕಲ್ ಕ್ಲಾರ್ಕ್, ಶೇನ್ ವಾಟ್ಸನ್ ಮತ್ತು ಌಲೆಕ್ಸ್ ಬ್ಲಾಕ್​ವೆಲ್​ ಸೇರಿದಂತೆ ಇನ್ನೂ 10 ಮಂದಿ ಮಾಜಿ ಆಟಗಾರರು, ಈ ಪಂದ್ಯವನ್ನ ಆಡಲಿದ್ದಾರೆ. ಮಾಜಿ ನಾಯಕ ಸ್ಟೀವ್ ವ್ಹಾ ಮತ್ತು ಮಹಿಳಾ ತಂಡದ ಮಾಜಿ ಆಟಗಾರ್ತಿ ಮಿಲ್ ಜೋನ್ಸ್​ ಸಹ ಮಾಜಿ ಕ್ರಿಕೆಟಿಗರಿಗೆ ಸಾಥ್ ನೀಡಲಿದ್ದಾರೆ.