ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸುದ್ದಿಯಾದ ಸಂಜನಾ ! ಬೆಂಗಳೂರು, ಜನವರಿ 13, 2019 (..): ನಟಿ ಸಂಜನಾ ಗಲ್ರಾಣಿ ಸಂಚಾರಿ ನಿಯಮ ಉಲ್ಲಂಘಿಸಿ ಮತ್ತೆ ಸುದ್ದಿಯಾಗಿದ್ದಾರೆ. ಬೆಂಗಳೂರಿನ ಮೆಜಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಸೆಲ್ಪೀ ವಿಡಿಯೋ ಮಾಡಿದ್ದರು. ತೆಲುಗು ನಟ ಮಹೇಶ್ ಬಾಬು ಮೂವಿ ವೀಕ್ಷಣೆಗೆ ತೆರಳುತ್ತಿದಾಗ ಜೋಷ್ ನಲ್ಲಿ ಈ ವಿಡಿಯೋ ಮಾಡಿದ್ದರು. ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಎಂದು ಟ್ರಾಫಿಕ್ ನಿಯಮ ಹೇಳುತ್ತೆ. ಅಲ್ಲದೆ ಮೊಬೈಲ್​ನಲ್ಲಿ ಮಾತನಾಡಿದರೆ ಅಥವಾ ಮೊಬೈಲ್ ಬಳಕೆಯೊಂದಿಗೆ ವಾಹನ ಚಲಾಯಿಸಿದರೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಈ ಫೋಟೋವನ್ನು ಪೋಸ್ಟ್ ಮಾಡಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.