ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರ: ಇಂದು ಬಿಜೆಪಿಯಿಂದ ಕನಕಪುರ ಚಲೋ… ರಾಮನಗರ,ಜ,13,2020(..): ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಪಾಲಬೆಟ್ಟದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಹಿಂದೂ ಜಾಗರಣ ವೇದಿಕೆ ಇಂದು ಕನಕಪುರ ಚಲೋ ಆಯೋಜಿಸಿದೆ. ಕನಕಪುರದ ಅಯ್ಯಪ್ಪ ಸ್ವಾಮಿ ದೇಗುಲದಿಂದ ತಹಶೀಲ್ದಾರ್ ವರೆಗೆ ಬಿಜಪಿ ಹಿಂದೂ ಜಾಗರಣ ವೇದಿಕೆ ಇಂದು ಕನಕಪುರ ಚಲೋ ನಡೆಸಲಿದ್ದು ಹಲವು ಮುಖಂಡರು ಭಾಗಿಯಾಗಲಿದ್ದಾರೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧವ್ಯಕ್ತಪಡಿಸಿ ಚಲೋ ನಡೆಸಲಾಗಿತ್ತಿದೆ. ಕನಕಪುರ ಚಲೋ ಆರಂಭವಾಗುವ ಸ್ಥಳಕ್ಕೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : - - – -