ಪಕ್ಷಕ್ಕೆ ನಿಷ್ಟಾವಂತರಾಗಿ ದುಡಿಯುವವರು ಇರಬಹುದು: ಇಲ್ಲದಿದ್ರೆ ಪಕ್ಷ ಬಿಟ್ಟು ಹೋಗಬಹುದು-ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಎಚ್ಚರಿಕೆ…. ಬೆಂಗಳೂರು,ಜ,11,2020(..): ಪಕ್ಷಕ್ಕೆ ನಿಷ್ಟಾವಂತರಾಗಿ ದುಡಿಯುವವರು ಇರಬಹುದು. ಇಲ್ಲದಿದ್ದರೇ ಪಕ್ಷ ಬಿಟ್ಟು ಹೊರ ಹೋಗಬಹುದು ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಇಂದು ಜೆಡಿಎಸ್ ಕಾರ್ಯಕರ್ತರ ಜತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಪಕ್ಷಕ್ಕೆ ನಿಷ್ಟರಾಗಿ ದುಡಿಯುವವರು ದುಡಿಯಬಹುದು ಇಲ್ಲದಿದ್ದರೇ ಹೊರಗೆ ಹೀಗಬಹುದು. ಕೇವಲ ತೋರಿಕೆಗೆ ಮಾತ್ರ ಯಾರೂ ಕೆಲಸ ಮಾಡಬಾರದು. ಯಾವ ಕೆಲಸದಲ್ಲಿ ಯಾರೇ ಹಸ್ತಕ್ಷೇಪ ಮಾಡಿದರೇ ಅಂತವರ ವಿರುದ್ದ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಹಾಗೆಯೇ ಇದು ನನ್ನ ಕೊನೆಯ ಹೋರಾಟ. ಪಕ್ಷ ಸಂಘಟನೆ ವಿಚಾರದಲ್ಲಿ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ನಿನ್ನೆ ಗ್ರಹಣವಾಗಿದೆ. ಈಗ ಯಾವುದೇ ಗ್ರಹಣ ಇಲ್ಲ. ಪಕ್ಷಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಹೆಚ್.ಡಿ ದೇವೇಗೌಡರು ಸಲಹೆ ನೀಡಿದರು. : - - –-