ಬಿಜೆಪಿಗೆ ಹಿಂದುತ್ವದ ಬಾಗಿಲು ಬಂದ್ ಮಾಡುತ್ತೇವೆ- ಸಚಿವ ಮಧು ಬಂಗಾರಪ್ಪ. ಬೆಂಗಳೂರು,ಮಾರ್ಚ್,7,2024(..):ಬಿಜೆಪಿಗೆ ಹಿಂದುತ್ವದ ಬಾಗಿಲು ಬಂದ್ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಅಯೋಧ್ಯೆ ರಾಮನ ವಿಚಾರ ವರ್ಕೌಟ್ ಆಗಲ್ಲ. ಈಗ ಮೋದಿ ಗ್ಯಾರಂಟಿ ಅಂತಿದ್ದಾರೆ ಜನರನ್ನ ಭಾವನಾತ್ಮಕವಾಗಿ ಮರಳು ಮಾಡಲು ಆಗಲ್ಲ. ಕರಾವಳಿ ಭಾಗದಲ್ಲೂ ಬಿಜೆಪಿ ಆಟ ನಡೆಯಲ್ಲ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲೂ ಬಿಜೆಪಿ ಪಲ್ಟಿ ಹೊಡೆಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. : - – - – – - .