ಮೈಸೂರಿನಲ್ಲೊಂದು ವಿನೂತನ ‘ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ‘ : ಹಳೇ ಬೋಗಿಗಳೇ ಕಲರ್ ಫುಲ್ ಕ್ಲಾಸುಗಳು. ಮೈಸೂರು, ಜ.10, 2019 : (.. ) : ಶಿಥಿಲಗೊಂಡಿದ್ದ ಸರಕಾರಿ ಶಾಲಾ ಕಟ್ಟಡದಲ್ಲಿ ಓದುತ್ತಿದ್ದ ಮಕ್ಕಳ ನೆರವಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಹಳೇಯ ರೈಲು ಬೋಗಿಗಳನ್ನೇ ಶಾಲೆಯ ಕೊಠಡಿಗಳನ್ನಾಗಿ ಪರಿವರ್ತಿಸುವ ಮೂಲಕ ಮಕ್ಕಳಿಗೆ ಆಕರ್ಷಕ ಕಲಿಕಾ ವಾತಾವರಣ ನಿರ್ಮಿಸಿದೆ. ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್ ಶಾಪ್ ನಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡು ಮುಚ್ಚುವ ಹಂತ ತಲುಪಿತ್ತು. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಶಾಲೆ ಸ್ಥಳಾಂತರಿಸಿ ಹೊಸ ಕಟ್ಟಡ ಕಟ್ಟಲು ವರ್ಷಗಳೇ ಬೇಕಾದ್ದರಿಂದ, ಈ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವಿಸಿತು. ಆಗಲೇ ರೈಲ್ವೆ ಇಲಾಖೆ ತನ್ನ ಬಳಿ ಇದ್ದ ಸ್ಕ್ರಾಪ್ (ಅನುಪಯುಕ್ತ) ಬೋಗಿಗಳನ್ನೇ ಬಳಸಿಕೊಂಡು ಶಾಲಾ ಕೊಠಡಿ ನಿರ್ಮಿಸಲು ಮುಂದಾಯಿತು. ಪರಿಣಾಮ ಇದೀಗ ಆಕರ್ಷಕ ಕೊಠಡಿಗಳು ಸಿದ್ಧಗೊಂಡಿದ್ದು ವಿದ್ಯಾರ್ಥಿಗಳಿಗೆ ಸಖತ್ ಖುಷಿ ನೀಡಿದೆ.ನಲಿ-ಕಲಿ ಬೋಧಿಸಲು ಸೂಕ್ತ ವಾತಾವರಣ ಕಲ್ಪಿಸಿರುವ ರೈಲ್ವೆ ಇಲಾಖೆ, ಬೋಗಿಗಳ ಹೊರ ಭಾಗದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಅಂಶಗಳನ್ನು ಚಿತ್ರಗಳ ರೂಪದಲ್ಲಿ ಬಿಡಿಸಿದೆ. ಆ ಮೂಲಕ ಅವರ ಜ್ಞಾನಾರ್ಜನೆಗೂ ಒತ್ತು ನೀಡಿದೆ.ಈ ಅಪರೂಪದ ರೈಲು ಬೋಗಿ ಶಾಲಾ ಕೊಠಡಿ ಜ.11 ರಂದು ಉದ್ಘಾಟನೆಗೊಳ್ಳಲಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ದಕ್ಷಿಣ ವಲಯದ ರೈಲ್ವೆ ಕಾರ್ಯಗಾರ ಕಾಲೋನಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಕ್ಕಾಗಿ ರೈಲು ಬೋಗಿಗಳು ಸಂಪೂರ್ಣ ಸಿಂಗಾರಗೊಂಡು ಸಜ್ಜಾಗಿವೆ. : , . : . . , . . (), , . , , -. . . -, . . . - ( ) . ’ . . . 11, 9 . . . , ’ ? . .