ಬಿಎಂಟಿಸಿ ಬಸ್ ನಿಂದ ಸರಣಿ ಅಪಘಾತ: ಆರು ಕಾರು ಮತ್ತು ಎರಡು ಆಟೋಗಳು ಜಖಂ…… ಬೆಂಗಳೂರು,ಜ,10,2020(..): ಬಿಎಂಟಿಸಿ ವೋಲ್ವೋ ಬಸ್ ವೊಂದು ಸರಣಿ ಅಪಘಾತ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಆರು ಕಾರುಗಳು ಎರಡು ಆಟೋಗಳಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಜಯನಗರ ಪಂಪ್ ಹೌಸ್ ಬಳಿ ಈ ಘಟನೆ ನಡೆದಿದೆ. ಡಿಪೋ 25ಕ್ಕೆ ಸೇರಿದ ಕೆಎ 57 ಎಫ್ 318 ಸಂಖ್ಯೆಯ ಬಿಎಂಟಿಸಿ ವೋಲ್ವೊ ಬಸ್ ಏರ್‌ಪೋರ್ಟ್ ರಸ್ತೆಯಿಂದ ಬಿಟಿಎಂ ಲೇಔಟ್‌ ಕಡೆ ತೆರಳುತ್ತಿತ್ತು. ಈ ವೇಳೆ ಸಿಗ್ನಲ್ ನಲ್ಲಿ ನಿಂತಿದ್ದ ಕಾರು ಮತ್ತು ಆಟೋ, ಬಸ್ ಗೆ ಡಿಕ್ಕಿಯಾಗಿದೆ. ಪರಿಣಾಮ ಎಲ್ಲಾ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಇತ್ತೀಚೆಗೆ ಬಿಎಂಟಿಸಿ ಬಸ್ ಸರಣಿ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- - - – .