ರಾಧಿಕಾ ಕುಮಾರಸ್ವಾಮಿ, ವಿಜಯ್ ರಾಘವೇಂದ್ರ ‘ನಿಮಗಾಗಿ’ ಮತ್ತೆ ಟೇಕಾಫ್ ! ಬೆಂಗಳೂರು, ಜನವರಿ 10, 2019 (..): ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ ರಾಘವೇಂದ್ರ ನಟನೆಯ ‘ನಮಗಾಗಿ’ ಸಿನಿಮಾಗೆ ಮತ್ತೆ ಮರು ಜೀವ ಬಂದಿದೆ. 20 ದಿನಗಳ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ವಿರಾಜ್ ನಿರ್ದೇಶಕ ರಘುರಾಮ್ ಅವರನ್ನು ಸಂಪರ್ಕ ಮಾಡಿದ್ದಾರೆ. ‘ನಮಗಾಗಿ’ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಸಿನಿಮಾವನ್ನು ಮತ್ತೆ ಶುರು ಮಾಡಬೇಕು ಎಂದು ಮಾತನಾಡಿದ್ದಾರೆ. ರಾಧಿಕಾ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ರಘುರಾಮ್ ತಿಳಿಸಿದ್ದಾರೆ.