‘ಸರಿಲೇರು ನೀಕೆವ್ವರು’ ಚಿತ್ರಕ್ಕಾಗಿ ಒಂದು ಕೋಟಿ ಸಂಭಾವನೆ ಪಡೆದ ರಶ್ಮಿಕಾ ಬೆಂಗಳೂರು, ಜನವರಿ 10, 2019 (..): ರಶ್ಮಿಕಾ ಮಂದಣ್ಣ ಇದೀಗ ಒಂದು ಚಿತ್ರಕ್ಕೆ ಒಂದು ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ. ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ 1.1 ಕೋಟಿ. ಇನ್ನು ನಟಿ ವಿಜಯಶಾಂತಿ ‘ಸರಿಲೇರು ನೀಕೆವ್ವರು’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ನಟಿ ವಿಜಯಶಾಂತಿ 1.5 ಕೋಟಿ ರೂಪಾಯಿಯನ್ನ ಸಂಭಾವನೆಯಾಗಿ ಪಡೆದಿದ್ದಾರೆ.