ಲಂಕಾ-ಟೀಂ ಇಂಡಿಯಾ ಅಂತಿಮ ಟಿ-20 ಕದನ ಇಂದು ಪುಣೆ, ಜನವರಿ 10, 2019 (..): ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದ ಭಾರತ ಇಂದು ಶ್ರೀಲಂಕಾ ವಿರುದ್ಧ ಕೊನೆಯ ಹಣಾಹಣಿ ನಡೆಸಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಭರವಸೆಯಲ್ಲಿ ಭಾರತವಿದ್ದರೆ, ಗೆದ್ದು ಸಮಬಲ ಸಾಧಿಸುವ ಗುರಿಯನ್ನು ಲಂಕಾ ಹೊಂದಿದೆ. ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಯಾರು ಜಯಗಳಿಸುತ್ತಾರೆ ಕಾದು ನೋಡಬೇಕು.