ಫೆಬ್ರವರಿ 7ಕ್ಕೆ ವಿಜಯ್ ರಾಘವೇಂದ್ರ ‘ಮಾಲ್ಗುಡಿ ಡೇಸ್’ ಬಿಡುಗಡೆ ಬೆಂಗಳೂರು, ಜನವರಿ 09, 2019 (..): ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಕೆಲವು ದಿನಗಳ ಮೊದಲೇ ಈ ಸಿನಿಮಾದ ಲುಕ್ ವೈರಲ್ ಆಗಿತ್ತು. ವಿಜಯ್ ರಾಘವೇಂದ್ರ ಪಕ್ಕಾ ವಯಸ್ಸಾದವರ ರೀತಿ ಲುಕ್ ಇರುವ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಸಿನಿಮಾ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ರತ್ನಾಕರ ಕಾಮತ್ ನಿರ್ಮಾಣ ಮಾಡಿದ್ದಾರೆ.