ಆ್ಯಂಬುಲೆನ್ಸ್ ಡಿಕ್ಕಿ: ಬೈಕ್ ನಲ್ಲಿದ್ದ ಇಬ್ಬರು ಸಾವು… ಬೆಂಗಳೂರು,ಜ,8,2020(..): ಅಂಬ್ಯುಲೆನ್ಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹಳೇ ಏರ್ ಪೋರ್ಟ್ ರಸ್ತೆಯ ಶ್ರಿನಿವಾಗಿಲು ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಇಬ್ರಾಹಿಂ(28), ಖಲೀಲ್(30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೈಕ್ ಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಶೋಕನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ. : –- - -