ನಾನು ಮತ್ತು ಗುಂಡ ಚಿತ್ರಕ್ಕೆ ಯು/ಏ ಸರ್ಟಿಫಿಕೇಟ್: ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ …. ಬೆಂಗಳೂರು,ಜ,8,2020(..): ಯುಟರ್ನ್, ಒಂದು ಮೊಟ್ಟೆಯ ಕಥೆ ವಿತರಕರಿಂದ ನಾನು ಮತ್ತು ಗುಂಡ ಚಿತ್ರ ಬಿಡುಗಡೆಗಾಗಿ ಕಾಯುತ್ತಿರುವವರಿಗೊಂದು ಸಿಹಿ ಸುದ್ದಿ. ನಾನು ಮತ್ತು ಗುಂಡ ಸಾಕುಪ್ರಾಣಿಗಳ ಮೇಲಿನ ಸೆಂಟಿಮೆಂಟ್ ಇರೋರಿಗೆ ಹೇಳು ಮಾಡಿಸಿದ ಸಿನಿಮಾ. ಚಂದನವನದ ಅಂಗಳದಲ್ಲಿ ಬಹಳ ವರ್ಷಗಳ ನಂತ್ರ ತಯಾರಾಗಿರೋ ಪ್ರಾಣಿ ಮತ್ತು ಆತನ ಒಡಯನ ನಡುವಿನ ಕೋಮಲ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾ ಇದಾಗಿದೆ. ಹೌದು ಈಗ ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೀಸರ್ ವಿಶೇಷವಾಗಿ ಸದ್ದು ಮಾಡುತ್ತಿದೆ. ಇದಕ್ಕೆ ಒಂದೆಡೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆ ಕಾರಣವಾದರೆ ಇನನ್ನೊಂದೆಡೆ ಸಿಂಬಾ ಅನ್ನೋ ಶ್ವಾನ ತನ್ನ ಅಭಿನಯದಿಂದ ಮೆಚ್ಚುಗೆ ಗಳಿಸಿದೆ. ಚಿತ್ರರಂಗದಲ್ಲಿ ಸದ್ಯ ಕಾಮಿಡಿ ಪಾತ್ರಗಳನ್ನ ನಿಭಾಯಿಸುತ್ತಿರುವ ಶಿವರಾಜ್​ ಗೆ ಸಂಯುಕ್ತ ಹೊರನಾಡು ಜೋಡಿಯಾಗಿದ್ದಾರೆ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ ಇದಾಗಿದ್ದು, ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆಯಿದೆ. ಕಥಾವಸ್ತುವನ್ನೇ ಹೀರೋವನ್ನಾಸಿಕೊಂಡ ಶೈಲಿ ವಿಶೇಷ ನಿರೀಕ್ಷೆ ಹುಟ್ಟಿಸುವುದ್ದಲ್ಲದೆ, ಚಿತ್ರ ಮೇಲೆ ಭರವಸೆ ಹೆಚ್ಚಿಸಿದೆ ಅಂದ್ರೆ ತಪ್ಪಿಲ್ಲ. ಸೆನ್ಸಾರ್ ಯು/ಏ ಏತನ್ಮಧ್ಯೆ ನಾನು ಮತ್ತು ಗುಂಡ ಚಿತ್ರ ಸದ್ಯ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಏ ಸರ್ಟಿಫಿಕೇಟ್ ಕೊಟ್ಟು ಇದು ಎಲ್ಲಾ ವರ್ಗದವರು ನೋಡುವಂತಹ ಸಿನಿಮಾ ಎಂದಿದೆ. ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರವನ್ನು ಸೇರಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಾನು ಮತ್ತು ಗುಂಡ ತಂಡ ಟ್ರೈಲರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ. : / - - – - -.