ಭಟ್ರು-ಗಣೇಶ್ ‘ಗಾಳಿ ಪಟ-2’ ಅರ್ಧ ಹಾರಾಟ ಮುಗೀತು ಬೆಂಗಳೂರು, ಜನವರಿ 07, 2019 (..): ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಕುದುರೆಮುಖದ ಸುಂದರ ತಾಣದಲ್ಲಿ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದ ಮೊದಲ ಹಂತ ಮುಕ್ತಾಯವಾಗಿದೆ. ಕುದುರೆಮುಖದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೀಗ ಎರಡನೇ ಹಂತಕ್ಕೆ ಸಿದ್ಧತೆ ನಡೆದಿದೆ. ಈ ಸಿನಿಮಾದಲ್ಲಿ ಗಣೇಶ್ ಜತೆಗೆ ದಿಗಂತ್, ಪವನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಾಳಿಪಟ ಸಿನಿಮಾ ಯಶಸ್ವಿಯಾಗಿತ್ತು. ಹೆಚ್ಚು ಕಡಿಮೆ ಅದೇ ಸೂತ್ರವಿಟ್ಟುಕೊಂಡೂ ಈ ಸಿನಿಮಾವನ್ನೂ ಮಾಡಲಾಗುತ್ತಿದೆ.