ತಮಿಳುನಾಡು : ಸಿಎಂ ಸ್ಟ್ಯಾಲಿನ್‌ ಪೋಸ್ಟರ್‌ ತಂದ ಎಡವಟ್ಟು..! ಚೆನ್ನೈ, ಮಾ.೦೬, ೨೦೨೪ : ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾವಚಿತ್ರದ ಪೋಸ್ಟರ್ ವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪೋಸ್ಟರ್‌ನಲ್ಲಿ ಎಂಕೆ ಸ್ಟಾಲಿನ್ ಅವರ ಚಿತ್ರವಿದೆ, ಅದರ ಮೇಲೆ ‘ತಮಿಳುನಾಡಿನ ವಧು’ ( ) ಎಂದು ಬರೆಯಲಾಗಿದೆ. ಮೂಲಗಳ ಪ್ರಕಾರ, ಪೋಸ್ಟರ್ ಅನ್ನು ‘ಪ್ರೈಡ್ ಆಫ್ ತಮಿಳುನಾಡು’ ಅಂದ್ರೆ ʼ ತಮಿಳು ನಾಡಿನ ಹೆಮ್ಮೆ ʼ ಎಂದು ಮುದ್ರಿಸಲು ಯೋಜಿಸಲಾಗಿದೆ. ಆದರೆ ಮುದ್ರ ರಾಕ್ಷಸನ ಪರಿಣಾಮ, ಕಾಗುಣಿತ ದೋಷದಿಂದ ಪ್ರೈಡ್‌ ಬದಲಾಗಿ ಬ್ರೈಡ್‌ ಎಂದು ಪ್ರಿಂಟ್‌ ಮಾಡಲಾಗಿದೆ. ಇದರಿಂದ ಪೋಸ್ಟರ್‌ ನ ಭಾವಾರ್ಥ ಎಡವಟ್ಟಾಗಿದೆ. ಇದರ ಫಲಿತಾಂಶವು ಸಾಕಷ್ಟು ಸ್ವಾರಸ್ಯಗಳಿಗೆ ಕಾರಣವಾಗಿದೆ. ಪೋಸ್ಟರ್ ಹಾಕಿದ್ದು ಯಾರು, ಎಲ್ಲಿ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. “ತಮಿಳುನಾಡಿನ ವಧು,” ನಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ಹಲವಾರು ಮಂದಿ ಹಲವು ಬಗೆಯ ಕಮೆಂಟ್ಸ್‌ ಹಂಚಿದ್ದಾರೆ. ಕೃಪೆ : ಹಿಂದೂಸ್ತಾನ್‌ ಟೈಮ್ಸ್‌ : – – ‘ ’- -‘’ ?’