ಕನ್ನಡ ಸಂಘಟನೆ ಬಗ್ಗೆ ಸಚಿವ ಸಿಟಿ ರವಿ ಹೇಳಿಕೆ ವಿಚಾರ: ಕ್ಷಮೆ ಕೋರುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ… ಮೈಸೂರು,ಜ,6,2020(..): ಕನ್ನಡ ಪರ ಸಂಘಟನೆಗಳ ಬಗ್ಗೆ ‘ತುಕ್ಡೆ ಗ್ಯಾಂಗ್’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸಿ.ಟಿ ರವಿ ವಿರುದ್ಧ ಮೈಸೂರಿನಲ್ಲಿ ಕನ್ನಡ ಕ್ರಾಂತಿದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕನ್ನಡ ಕ್ರಾಂತಿದಳ ಕಾರ್ಯಕರ್ತರು ಸಚಿವ ಸಿಟಿ ರವಿ ಚಪ್ಪಲಿ ಹಾರ ಹಾಕಿದ ಪೋಟೋ ಹಿಡಿದು ಪ್ರತಿಭಟನೆ ನಡೆಸಿ ತುಕಾಲಿ ರವಿ ಎಂದು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕನ್ನಡ ಸಂಘಟನೆಗಳ ಕ್ಷಮೆ ಕೋರುವಂತೆ ಸಚಿವರಿಗೆ ತಾಕೀತು ಮಾಡಿದರು. ಒಂದು ವೇಳೆ ಸಚಿವ ಸಿ.ಟಿ ರವಿ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. : ’- – - -