ಜ.8 ರಂದು ಮೈಸೂರಿನಲ್ಲಿ ‘ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ’ ಕಾರ್ಯಕ್ರಮ: ಗೋಡೆ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ… ಮೈಸೂರು,ಜ,6,2020(..): ಸ್ವಚ್ಚ ಸರ್ವೇಕ್ಷಣೆ ಹಿನ್ನೆಲೆ ಜನವರಿ 8 ರಂದು ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. “ಸ್ವಚ್ಚ ಭಾರತ ಅಭಿಯಾನ ಹಾಗೂ ಕಾಡು ಜೀವಿ ಸಂರಕ್ಷಣೆ” ಎಂಬ ಶೀರ್ಷಿಕೆಯಡಿ ಡಿ.ಕೆ ಕನ್ಸ್ಟ್ರಕ್ಷನ್ಸ್ & ನಮ್ಮ ಮೈಸೂರು ಫೌಂಡೇಶನ್ ರವರ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆಯು ಗೋಡೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿದೆ. ಚಾಮರಾಜೇಂದ್ರ ಮೃಗಾಲಯದ ಸಮೀಪ ಜನವರಿ 8 ರಂದು ಬೆಳಿಗ್ಗೆ 7.30ಕ್ಕೆ ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ’ ಕಾರ್ಯಕ್ರಮ ಆರಂಭವಾಗಲಿದೆ. ಚಿತ್ರಕಲಾ & ಕಾಡು ಜೀವಿ ಸಂರಕ್ಷಣೆ ಪ್ರೇಮಿಗಳು ಹಾಗೂ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು , ಗೋಡೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಚಿತ್ರಕಲೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ತರಬೇಕಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10ಸಾವಿರ ರೂ. ದ್ವಿತೀಯ ಬಹುಮಾನ 5ಸಾವಿರ ರೂ ಇರುತ್ತದೆ. ಚಿತ್ರಕಲೆ ಅಳತೆ 5*12 ಅಡಿ ಆಗಿರುತ್ತದೆ. … 2020 “ / ” “ & ” .. & & & . : / - –