ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿ: ಹೌಹಾರಿದ ಜನರು…. ಮೈಸೂರು,ಜ,5,2020(..): ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯನ್ನ ಕಂಡ ಜನರು ಕೆಲಕಾಲ ಹೌಹಾರಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಅಳ್ಳೂರು ಗ್ರಾಮದ ಗೇಟ್ ಬಳಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಸುಮಾರು 1 ಗಂಟೆ ಕಾಲ ಚಿರತೆ ಮರಿ ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಠಿಸಿತು. ಮೈಸೂರು ವಿರಾಜಪೇಟೆ ರಸ್ತೆಗೆ ಬಂದು ಕುಳಿತ ಚಿರತೆ ಮರಿ ನಂತರ ವಾಹನಗಳ ಚಕ್ರದ ಕೆಳಗೆ, ದೇವಸ್ಥಾನ ಬಳಿ ಓಡಾಡಿದ್ದು ಚಿರತೆ ಮರಿ ಕಂಡು ಪ್ರಯಾಣಿಕರು ಆತಂಕಕ್ಕೊಳಗಾದರು. ಈ ವೇಳೆ ಚಿರತೆ ಮರಿ ಜನಗಳ ಮಧ್ಯೆಯೇ ಓಡಾಡಿದ್ದು ಚಿರತೆ ಮರಿಯನ್ನು ಸನಿಹದಿಂದ ನೋಡಿ ಸ್ಥಳೀಯರು ಸಂಭ್ರಮಿಸಿದರು. ಕೊನೆಗೆ ಚಿರತೆ ಮರಿ ಕಾಡಿನ ಕಡೆ ಹೆಜ್ಜೆ ಹಾಕಿ ಕಣ್ಮರೆಯಾಯಿತು. : - –-