ಕಿಚ್ಚನ ಅಭಿಮಾನಿಗಳಿಗೆ ‘ಸಂಕ್ರಾಂತಿ’ಗೆ ಶುಭ ಸುದ್ದಿ ! ಬೆಂಗಳೂರು, ಜನವರಿ 02, 2019 (..): ಕೋಟಿಗೊಬ್ಬ 3 ತಂಡದಿಂದ ಹೊಸ ಸುದ್ದಿ ಬಂದಿದೆ. ಈ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಅಂದರೆ ಜನವರಿ 15 ರಂದು ಲಾಂಚ್ ಆಗಲಿದೆ. ಹೌದು. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಕೋಟಿಗೊಬ್ಬ 3 ಸಿನಿಮಾದ ಶೂಟಿಂಗ್ ವೇಳೆ ವಿದೇಶದಲ್ಲಿ ಚಿತ್ರತಂಡ ವಂಚಕರ ಕೈಗೆ ಸಿಲುಕಿ ದೊಡ್ಡ ಸುದ್ದಿಯಾಗಿತ್ತು. ಅದೆಲ್ಲವನ್ನೂ ಮೀರಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ.