ಹೊಸ ವರ್ಷ ಸಂಭ್ರಮಾಚರಣೆ : ಬೆಂಗಳೂರಿನಲ್ಲಿ ಒಂದೇ ದಿನ 426 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲು… ಬೆಂಗಳೂರು,ಜ,1,2019(..): ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿವರೆಗೆ ಸಂಭ್ರಮದಲ್ಲಿ ಯುವಸಮೂಹ ಮಿಂದೆದಿದ್ದಾರೆ. ಈ ನಡುವೆ ಕುಡಿದು ವಾಹನ ಚಾಲನೆ ಮಾಡಿದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಸುಮಾರು 426 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕುಡಿದು ವಾಹನ ಚಲಾಯಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಅದನ್ನೂ ಮೀರಿ ಡ್ರೈಂಕ್ ಅಂಡ್ ಡ್ರೈವ್ ಮಾಡಿದ್ದವರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪೂರ್ವ ವಿಭಾಗದಲ್ಲಿ 99 ಪಶ್ಚಿಮ ವಿಭಾಗದಲ್ಲಿ 254 ಮತ್ತು ಉತ್ತರ ವಿಭಾಗದಲ್ಲಿ 73 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾಗಿದ್ದು 426 ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. : -426 - –-