ಹೊಸ ವರ್ಷಾಚರಣೆ ನೆಪದಲ್ಲಿ ಮೈಮರೆಯಬೇಡಿ: ಪೊಲೀಸರ ಅಭಿಯಾನಕ್ಕೆ ಕೈ ಜೋಡಿಸಿದ ‘ರಾಕಿ ಭಾಯ್’ ಬೆಂಗಳೂರು, ಡಿಸೆಂಬರ್ 31, 2019 (..): ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ಚಾಲನೆ ಮಾಡುವ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಯಶ್ ಕೈ ಜೋಡಿಸಿದ್ದಾರೆ. ವಿಡಿಯೋ ಸಂದೇಶ ಮೂಲಕ ಯಶ್ ಕುಡಿದು ಗಾಡಿ ಓಡಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಮಾತು ಕೇಳದಿದ್ದರೆ ಬೇಡ, ಕನಿಷ್ಠ ನಿಮ್ಮದೇ ಮೆಚ್ಚಿನ ನಟನ ಮಾತನ್ನಾದರೂ ಕೇಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.