ರಶ್ಮಿಕಾ ಡ್ಯಾನ್ಸ್​ ನೋಡಿ ‘ಸ್ವೀಟ್​’ ಎಂದ ಹೃತಿಕ್​ ಬೆಂಗಳೂರು, ಡಿಸೆಂಬರ್ 31, 2019 (..): ಇದೀಗ ನಟಿ ರಶ್ಮಿಕಾ ಡ್ಯಾನ್ಸ್​ ನೋಡಿದ ಬಾಲಿವುಡ್​ ಡ್ಯಾನ್ಸ್​ ಕಿಂಗ್​ ಹೃತಿಕ್​ ರೋಷನ್​ ಸ್ವೀಟ್​​ ಎಂದಿದ್ದಾರೆ! ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಭೀಷ್ಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ನಿತಿನ್​ಗೆ ಹಿರೋಯಿನ್​ ಆಗಿದ್ದಾರೆ. ಇನ್ನೂ ಶೂಟಿಂಗ್​ ಸೆಟ್​ನಲ್ಲಿ ನಟ ನಿತಿನ್​ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಖತ್ ವರ್ಕೌಂಟ್ ಆಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ವಾರ್​ ಸಿನಿಮಾ ಗುಂಗುರೂ ಹಾಡಿಗೆ ನಟಿ ರಶ್ಮಿಕಾ ಮತ್ತು ನಿತಿನ್​ ಸ್ಟೆಪ್​ ಹಾಕಿದ್ದಾರೆ. ಆ ಸಿನಿಮಾದ ವಿಡಿಯೋವನ್ನು ರಶ್ಮಿಕಾ ತನ್ನ ಟ್ಟಿಟ್ಟರ್​ ಖಾತೆಯಲ್ಲಿ ಅಪ್ಲೋಡ್​ ಮಾಡಿದ್ದಾರೆ. ನಟ ಹೃತಿಕ್​ ರೋಷನ್​ ಅವರಿಗೂ ಟ್ಯಾಗ್​ ಮಾಡಿದ್ದಾರೆ.