ಬೆಳಗಾವಿ ಕರ್ನಾಟಕದ ಒಂದು ಭಾಗ: ಗಡಿ ವಿಚಾರದಲ್ಲಿ ಪ್ರಚೋದನೆ ಮಾಡುವುದು ಸರಿಯಲ್ಲ- ಸಚಿವ ಜಗದೀಶ್ ಶೆಟ್ಟರ್… ಬೆಂಗಳೂರು,ಡಿ,30,2019(..): ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪ್ರಚೋದನೆ ಮಾಡಿವುದು ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಮಹಾರಾಷ್ಟ್ರ ಗಡಿ ವಿವಾದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಮಹಾರಾಷ್ಟ್ರದಲ್ಲಿ ಸಿಎಂ ಬಿಎಸ್ ವೈ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಸಿಎಂ ಪ್ರತಿಕೃತಿ ದಹನ ಬೇಡ. ಶಿವಸೇನೆ ಜತೆ ಕಾಂಗ್ರೆಸ್ ನಿಂತಿದೆ. ಮೊದಲು ಈ ಪುಂಡಾಟಿಕೆಯನ್ನ ನಿಲ್ಲಿಸಬೇಕು. ಪುಂಡಾಟಿಕೆಯನ್ನ ನೀವೇ ನಿಲ್ಲಿಸಿ ಎಂದು ಕಿಡಿಕಾರಿದರು. ಹಾಗೆಯೇ ದೇವೆಂದ್ರ ಫಡ್ನಾವೀಸ್ ಸಿಎಂ ಆಗಿದ್ದ ವೇಳೆ ಈ ರೀತಿಯ ಘಟನೆಗಳು ಆಗಿರಲಿಲ್ಲ. ಉದ್ಧವ್ ಠಾಕ್ರೆ ಸಿಎಂ ಆದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ. ಗಡಿ ವಿಚಾರದಲ್ಲಿ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹರಿಹಾಯ್ದರು. : - --- –- .