ಮಂಗಳೂರಿನಲ್ಲಿ ಹಿಂಸಾಚಾರ ಕೇಸ್: ಪ್ರಚೋದನಾಕಾರಿ ಸಂದೇಶ ರವಾನಿಸಿದ ಆರೋಪದಡಿ ವ್ಯಕ್ತಿಯ ಬಂಧನ… ಮಂಗಳೂರು,ಡಿ,31,2019(..): ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ, ಪೊಲೀಸ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಸಂದೇಶ ರವಾನಿಸಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೊಹಿದ್ದೀನ್ ಹಮೀಜ್ ಬಂಧಿತ ಆರೋಪಿ. ಮಂಗಳೂರು ಉತ್ತರ ಪೊಲೀಸರು ಹಮೀಜ್ ನನ್ನ ಬಂಧಿಸಿದ್ದಾರೆ. ಸಾರ್ವಜನಿಕ ಆಸ್ತಿ ಹಾಳುಮಾಡಿ ರಕ್ತಪಾತ ನಡೆಸಲು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದ . ಅಲ್ಲದೇ ಪೊಲೀಸರ ಮೇಲೆ ದಾಳಿ ನಡೆಸಿ ರಕ್ತಪಾತ ನಡೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಹಮೀಜ್ ಸಂದೇಶ ರವಾನಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಮಂಗಳೂರು ಉತ್ತರ ಪೊಲೀಸರು ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಹಮೀಜ್ ನನ್ನು ಬಂಧಿಸಿದ್ದಾರೆ. : - –- – – – .