ಪಾಕ್ ಪರ ಘೋಷಣೆ ಪ್ರಕರಣ: ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಲಿ- ಮಾಜಿ ಸಿಎಂ ಬೊಮ್ಮಾಯಿ. ಬೆಳಗಾವಿ,ಮಾರ್ಚ್,5,2024(..):ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಆಧರಿಸಿ ಈಗಾಗಲೇ ಮೂವರನ್ನ ಬಂಧಿಸಿದ್ದು ಈ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ದೇಶದ್ರೋಹಿಗಳ ರಕ್ಷಣೆಗೆ ಸಚಿವರು ನಿಂತಿದ್ದರು. ಪಾಕ್ ಪರ ಘೋಷಣೆ ಕೂಗಿದ್ದು ಮಾಧ್ಯಮದಲ್ಲಿ ಸ್ಪಷ್ಟವಾಗಿತ್ತು. ಆದರೂ ಸಹ ಜವಾಬ್ದಾರಿ ಮರೆತು ಸಚಿವರು ಆರೋಪಿಗಳ ಪರ ನಿಂತಿದ್ದರು. ಎಫ್ ಎಸ್ ಎಲ್ ರಿಪೋರ್ಟ್ ಬಂದು ನಾಲ್ಕು ದಿನ ಕಳೆದಿದೆ. ಎನ್ಐಎ ಎಂಟ್ರಿಯಾದ ಬಳಿಕ ಮೂವರನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. : - - –- – - - .