ಸ್ಯಾಂಡಲ್ ವುಡ್ ‘ದೂದ್ ಪೇಡಾ’ಗೆ ಹುಟ್ಟುಹಬ್ಬದ ಸಂಭ್ರಮ ಬೆಂಗಳೂರು, ಡಿಸೆಂಬರ್ 28, 2019 (..):ಇಂದು ನಟ ದಿಗಂತ್ ಗೆ ಹುಟ್ಟುಹಬ್ಬದ ಸಂಭ್ರಮ… ಹೌದು. ಸ್ಯಾಂಡಲ್ ವುಡ್ ದೂದ್ ಪೇಡಾ ದಿಗಂತ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ಅವರು ‘ಮಿಸ್ ಕ್ಯಾಲಿಫೊರ್ನಿಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸದ್ಯ ‘ಯುವರತ್ನ’, ‘ಗಾಳಿಪಟ-2’ ಮತ್ತು ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.