ಫರಾಹ್ ಖಾನ್, ರವೀನಾ ಟಂಡನ್’ಗೆ ಸಂಕಷ್ಟ: ಅಮೃತ್’ಸರ ಠಾಣೆಯಲ್ಲಿ ಎಫ್’ಐಆರ್ ಬೆಂಗಳೂರು, ಡಿಸೆಂಬರ್ 26, 2019 (..): ಬಾಲಿವುಡ್ ನಿರ್ದೇಶಕಿ ಫರಾಹ್ ಖಾನ್, ಹಾಸ್ಯನಟಿ ಭಾರತಿ ಸಿಂಗ್ ಮತ್ತು ನಟಿ ರವೀನಾ ಟಂಡನ್’ಗೆ ಸಂಕಷ್ಟ ಹೆಚ್ಚಾಗಿದೆ. ಈ ಮೂವರ ವಿರುದ್ಧ ಪಂಜಾಬ್’ನ ಅಮೃತ್ ಸರದಲ್ಲಿ ಎಫ್ ಐಆರ್ ದಾಖಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆಂಬ ದೂರಿದೆ. ಯುಟ್ಯೂಬ್ ಚಾನೆಲ್ ಒಂದರ ಕಾಮಿಡಿ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಧರ್ಮದ ಶಬ್ಧವೊಂದನ್ನು ಬಳಸಿದ್ದರು. ಈ ಸಂಬಂಧ ಪ್ರತಿಭಟನೆ ನಡೆದಿತ್ತು. ಇದಾದ ನಂತ್ರ ವಿಡಿಯೋ ವೀಕ್ಷಣೆ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 25ರಂದು ಪ್ರತಿಭಟನೆ ನಡೆದಿತ್ತು. ರಾತ್ರಿ 8.55ಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.