ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಬಿಜೆಪಿಗೆ 15 ಕೋಟಿಗೆ ಸೇಲಾಗಿದ್ರು- ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ.. ಮಂಡ್ಯ,ಡಿ,25,2019(..): ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಬಿಜೆಪಿಗೆ 15 ಕೋಟಿಗೆ ಸೇಲಾಗಿದ್ರು. ಹೀಗಾಗಿ ಜೆಡಿಸ್ ಸೋಲನುಭವಿಸಿತು ಎಂದು ಜೆಡಿಎಸ್ ತಾಲ್ಲೂಕು ಪಂಚಾಯತ್ ಸದಸ್ಯ ದಿನೇಶ್ ರಾಜಾಹುಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ದಿನೇಶ್ ರಾಜಾಹುಲಿ, ಉಪಚುನಾವಣೆ ವೇಳೇ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ 15ಕೋಟಿಗೆ ಬಿಜೆಪಿಗೆ ಸೇಲಾಗಿದ್ರು. ಈ ವಿಚಾರ ಜನರಿಗೆ ಗೊತ್ತಾಗಲಿಲ್ಲ. ಆದ್ರೆ ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ವಿಷಯ ತಿಳಿದು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದರು ಎಂದು ಹೇಳಿದ್ದಾರೆ. ಬೈ ಎಲೆಕ್ಷನ್ ನಲ್ಲಿ ನಮ್ಮ ಸೋಲಿಗೆ ಕಾಂಗ್ರೆಸ್ ಕಾರಣ. ಕೆ.ಆರ್.ಪೇಟೆಯ ಬೈಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷ ಸೋತಿಲ್ಲ. 57ಸಾವಿರ ಮತಗಳನ್ನು ಪಡೆದು ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ ಎಂದು ದಿನೇಶ್ ರಾಜಾಹುಲಿ ಹೇಳಿದ್ದಾರೆ. : - - –-- - – 15 .