ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1060 ನೇ ಜಯಂತಿ ಸರಳವಾಗಿ ಆಚರಣೆ: ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ… ಮೈಸೂರು,ಡಿ,24,2019(..): ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1060 ನೇ ಜಯಂತಿಯನ್ನ ಇಂದು ಸರಳವಾಗಿ ಆಚರಿಸಲಾಯಿತು. ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1060 ನೇ ಜಯಂತಿಯನ್ನ ಸರಳವಾಗಿ ಆಚರಿಸಲಾಯಿತು. ಶ್ರೀ ಶಿವರಾತ್ರೀಶ್ವರ ಉತ್ಸವ ಮೂರ್ತಿ ಮೆರವಣಿಗೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಇದೇ ವೇಳೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಅತಿವೃಷ್ಠಿಯ ಕಾರಣದಿಂದ ಈ ಬಾರೀ ಸರಳವಾಗಿ ಜಯಂತಿ ಆಚರಣೆ ನಿರ್ಧಾರ ಮಾಡಲಾಗಿತ್ತು. ಇನ್ನು ನೆರ ಹಾವಳಿ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮರಿತಿಬ್ಬೇಗೌಡ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಆರ್ . ಧೃವನಾರಾಯಣ್,ವಾಸು ಸೇರಿದಂತೆ ಇತರರು ಭಾಗಿಯಾಗಿದ್ದರು. : - - - 1060th –