ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಹಿನ್ನೆಲೆ: ಈದ್ಗಾ ಮೈದಾನದಲ್ಲಿಂದು ಶಾಂತಿ ಸೌಹಾರ್ದ ಸಭೆ… ಬೆಂಗಳೂರು,ಡಿ,23,2019(..): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಹಿನ್ನಲೆ, ಅಲ್ಪಸಂಖ್ಯಾತ ಸಮುದಾಯದಿಂದ ಖದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿಂದು ಶಾಂತಿ ಸೌಹಾರ್ದ ಸಭೆ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಭೆಯ ಆಯೋಜಕ ಸಯ್ಯದ್, ಸಿಎಎ ಪರ ವಿರೋಧ ಪ್ರತಿಭಟನೆ ಹಿನ್ನೆಲೆ ಖದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿಂದು ಶಾಂತಿ ಸೌಹಾರ್ದ ಸಭೆ ಆಯೋಜಿಸಿದ್ದೇವೆ. ಎರಡು ಗಂಟೆಗಳ ಕಾಲ ನಡೆಯುವ ಸಭೆಯಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಲ್ಲ. ಯಾವುದೇ ರ್ಯಾಲಿ ನಡೆಸುವುದಿಲ್ಲ. ಇದೊಂದು ಶಾಂತಿಯುತ ಸಮಾವೇಶವಾಗಿರುತ್ತದೆ ಎಂದರು. ಹಾಗೆಯೇ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತೇವೆ. ಸಭೆಯಲ್ಲಿ ನ್ಯಾ. ಗೋಪಾಲಗೌಡ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಆಯೋಜಕ ಸಯ್ಯದ್ ತಿಳಿಸಿದರು. : – - - - - .