ಜನರ ಧ್ವನಿ ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ- ಸರ್ಕಾರದ ವಿರುದ್ದ ವಾಗ್ದಾಳಿ: ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸಿದ್ಧರಾಮಯ್ಯ… ಬೆಂಗಳೂರು,ಡಿ,20,2019(..): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ನಿನ್ನೆ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾದ ಪ್ರಕರಣ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು ಮತ್ತು ಫೈರಿಂಗ್ ಮಾಡಿದ್ದ ವಿಡಿಯೋವನ್ನ ಬಿಡುಗಡೆ ಮಾಡಿದರು. ನಿನ್ನೆ ಮಂಗಳೂರಿನಲ್ಲಿ ಅಹಿಕತರ, ಅಮಾನವೀಯ ಘಟನೆ ನಡೆದಿದೆ. ಸಿಎಎ ವಿರುದ್ದ ಎಲ್ಲೆಡೆ ಜಾತ್ಯಾತೀತವಾಗಿ ಹೋರಾಟ ಮಾಡುತ್ತಿದ್ದಾರೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಧರಣಿ ಅಗತ್ಯ. ರಾಜ್ಯ ಸರ್ಕಾರ ಜನರ ಧ್ವನಿ ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆ ಹತ್ತಿಕ್ಕಲು ಸೆಕ್ಷನ್ 144 ಅನ್ನು ಅನಗತ್ಯವಾಗಿ ವಿಧಿಸಲಾಗಿದೆ. ಇದು ಸಂವಿಧಾನಕ್ಕೆ ವಿರುದ್ದವಾದ್ದದ್ದು. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಿಸಿದಂತಿದೆ. ಹಿಟ್ಲರ್ ಆಡಳಿತ ನೆನಪಿಸುವಂತಿದೆ. ನನ್ನ ಐದು ವರ್ಷದ ಅವಧಿಯಲ್ಲಿ ಗೋಲಿಬಾರ್ ನಡೆದಿರಲಿಲ್ಲ. ಸರ್ಕಾರ ಜನರ ಧ್ವನಿ ಅಡಗಿಸಲು ಯತ್ನಿಸಿದೆ. ಇದು ಸರಿಯಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದರು. … 144 . . 144. ’ . , . ’ . , . , , ’ . ’ . . ’ . . , : - - - - 144- -.