ಟ್ವಿಟ್ಟರ್​, ಇನ್​ಸ್ಟಾಗ್ರಾಮ್​ ಖಾತೆ ಹೆಸರು ಬದಲಿಸಿದ ಶಾನ್ವಿ ! ಬೆಂಗಳೂರು, ಡಿಸೆಂಬರ್ 19, 2019 (..):ಟ್ವಿಟ್ಟರ್​ ಮತ್ತು ಇನ್​ಸ್ಟಾಗ್ರಾಮ್​​ನಲ್ಲಿ ಹೆಸರು ಬದಲಿಸಿದ ನಟಿ ಶಾನ್ವಿ ತಮ್ಮ ಹೆಸರು ಬದಲಿಸಿದ್ದಾರೆ. ಟ್ವಿಟ್ಟರ್​ ಮತ್ತು ಇನ್​ಸ್ಟಾಗ್ರಾಮ್​​ನಲ್ಲಿ ಮೊದಲು ಶಾನ್ವಿ ಶ್ರೀವಾತ್ಸವ ಅಂತಿದ್ದು, ಇದೀಗ ಸಿನಿಮಾಕ್ಕೋಸ್ಕರ ‘ಲಕ್ಷ್ಮಿ ಫ್ರಮ್​​ ಅಮರಾವತಿ’ ಎಂದು ಚೇಂಜ್ ಮಾಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರಿಗೆ ಜೋಡಿಯಾಗಿ ಶಾನ್ವಿ ಅಭಿನಯಿಸಿದ್ದು, ಇದೇ ಡಿಸೆಂಬರ್​ 27ಕ್ಕೆ ಚಿತ್ರ ರಿಲೀಸ್​ ಆಗುತ್ತಿದೆ. ಈ ಸಿನಿಮಾ ಇದೀಗ ದೇಶದೆಲ್ಲೆಡೆ ಸುದ್ದಿ ಮಾಡುತ್ತಿದ್ದು, ಪ್ರಮೋಷನ್​ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ.